Skip to main content
ಸುದ್ದಿ ಸದ್ದು

ಡಾ.ಸಿದ್ಧರಾಮ ಹೊನ್ಕಲ್ ಗೆ ರಾಷ್ಟ್ರೀಯ ಗಜಲ್ ಮಾಣಿಕ್ಯ ಪ್ರಶಸ್ತಿ

ಡಾ.ಸಿದ್ಧರಾಮ ಹೊನ್ಕಲ್ ಗೆ ರಾಷ್ಟ್ರೀಯ ಗಜಲ್ ಮಾಣಿಕ್ಯ ಪ್ರಶಸ್ತಿ    image

ಧಾರವಾಡ- ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಅವರಿಗೆ ಇತ್ತೀಚೆಗೆ ಧಾರವಾಡದ ಕಸಾಪ ಭವನದಲ್ಲಿ ಅಕ್ಷರ ದೀಪ ಫೌಂಡೇಶನ್ ಗದಗ ಅವರ ಮೂಲಕ ನಡೆದ ರಾಷ್ಟ್ರೀಯ ಗಜಲ್ ಗೋಷ್ಠಿ, ರಾಷ್ಟ್ರೀಯ ಗಜಲ್ ಪುರಸ್ಕಾರ,ಗಜಲ್ ಗಾಯನ ಕಾರ್ಯಕ್ರಮದಲ್ಲಿ *ರಾಷ್ಟ್ರೀಯ ಗಜಲ್ ಮಾಣಿಕ್ಯ* ಪ್ರಶಸ್ತಿ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಡಾ.ಶ್ರೀಶೈಲ್ ಮಾದಣ್ಣನವರ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಮಹಾದೇವ ಬಸರಕೋಡ.ಹಾಗೂ ಸಮ್ಮೇಳನದ ಉದ್ಘಾಟಕರಾದ ಪ್ರೊ.ಸಿದ್ಧರಾಜು ಪುಜಾರಿ, ಹಿರಿಯ ಗಜಲ್ ಲೇಖಕಿ ಪ್ರಭಾವತಿ ದೇಸಾಯಿ, ಅಕ್ಷರದೀಪ ಫೌಂಡೇಶನ್ ದ ರೂವಾರಿ ಪ್ರವೀಣ್ ಕುಮಾರ್ ಕನ್ಯಾಳ ಮುಂತಾದವರು ಪ್ರಶಸ್ತಿ ನೀಡಿ ಗೌರವಿಸಿದರು.

Comments